ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಗತಿಗಳಿವು

ಮಹಿಳೆಯರನ್ನು ಕಾಡುತ್ತಿರುವ ಕ್ಯಾನ್ಸರ್‌ ಸಮಸ್ಯೆಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು. ಇದು ಈಗಾಗಲೇ 2ನೇ ಸ್ಥಾನದಲ್ಲಿದೆ. ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ 15-44 ವರ್ಷದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಸರ್ವಿಕಲ್‌ ಕ್ಯಾನ್ಸರ್‌ ಲಸಿಕೆ ಪಡೆಯುವುದರಿಂದ ಈ ಕಾಯಿಲೆಯನ್ನು ಶೇ. 85-90 ರಷ್ಟು ತಡೆಯಬಹುದಾಗಿದೆ.

ಗರ್ಭಕಂಠದ ಕ್ಯಾನ್ಸರ್ ಹೇಗೆ ಬರುತ್ತದೆ?
ಗರ್ಭಕಂಠದ ಕ್ಯಾನ್ಸರ್‌ ಪ್ರಮುಖವಾಗಿ ಲೈಂಗಿಕ ಸೋಂಕಿನಿಂದ ಬರುತ್ತದೆ. ಈ ಲೈಂಗಿಕ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುವುದು. ಮಹಿಳೆಯರಿಗೆ ಈ ಸೋಂಕು ತಗುಲಿದಾಗ ಗರ್ಭಕಂಠದ ಕ್ಯಾನ್ಸರ್ ಉಂಟಾಗುವುದು. ಆದರೆ ಈ ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟಬಹುದು ಎಂಬುವುದೇ ಸಮಧಾನಕರ. ಗರ್ಭಕಂಠದ ಕ್ಯಾನ್ಸರ್‌ ತಡೆಗಟ್ಟುವ ಲಸಿಕೆ ಬಂದಿದ್ದು ಇದರ ಬಗ್ಗೆ ಕೆಲ ತಪ್ಪು ಕಲ್ಪನೆಗಳು ಹರಿದಾಡುತ್ತಿದೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳು:
ಎಚ್‌ಪಿವಿ ಸೋಂಕು ಲೈಂಗಿಕ ಕ್ರಿಯೆಯಿಂದ ಒಬ್ಬರಿಂದ ಮತ್ತೊಬ್ರಿಗೆ ಹರಡುತ್ತದೆ. ಈಗ ಬಂದಿರುವ ಹೊಸ ಲಸಿಕೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಈ ಲಸಿಕೆ ಬಗ್ಗೆ ನೀವು ಈ ಸಂಗತಿಗಳನ್ನು ತಿಳಿದುಕೊಂಡರೆ ಒಳ್ಳೆಯದು.

* ಎಚ್‌ಪಿವಿ ವೈರಸ್ ಲೈಂಗಿಕಕ್ರಿಯೆ ಮೂಲಕ ಹರಡುತ್ತದೆ. ಆದ್ದರಿಂದ ಲಸಿಕೆಯನ್ನು ಹದಿಹರೆಯದ ಪ್ರಾಯದಲ್ಲಿಯೇ ತೆಗೆದುಕೊಳ್ಳುವುದು ಒಳ್ಳೆಯದು. ಆಗ ಈ ಸೋಂಕು ತಡೆಗಟ್ಟಲು ಸುಲಭವಾಗುವುದು.

* ಮಹಿಳೆಯರು ಈ ಲಸಿಕೆಯನ್ನು ತೆಗೆದುಕೊಳ್ಳಲೇಬೇಕು, ಹಾಗಂತ ಅವರು ಮಾತ್ರ ಈ ಲಸಿಕೆ ತೆಗೆದುಕೊಳ್ಳಬೇಕು ಎಂದೇನಿಲ್ಲ ಪುರುಷರಿಗೂ ಎಚ್‌ಪಿವಿ ಸೋಂಕು ಹರಡುವುದರಿಂದ ಪುರುಷರು, ಮಂಗಳಮುಖಿಯರು ಈ ಲಸಿಕೆ ಪಡೆಯಬಹುದು.

* ಈ ಲಸಿಕೆಯನ್ನು ಎರಡು ಡೋಸ್‌ನಲ್ಲಿ ನೀಡಲಾಗುತ್ತಿದ್ದು ಮೊದಲ ಡೋಸ್‌ ಪಡೆದಾದ ಮೇಲೆ 6 ತಿಂಗಳ ನಂತರ ಮತ್ತೊಂದು ಡೋಸ್‌ ಪಡೆಯಬೇಕು. 9-14ರ ಪ್ರಾಯದಲ್ಲಿ ಈ ಲಸಿಕೆ ಪಡೆಯುವುದು ಒಳ್ಳೆಯದು.

ಸರ್ವಿಕಲ್ ಕ್ಯಾನ್ಸರ್ ವ್ಯಾಕ್ಸಿನ್ ಸುರಕ್ಷಿತವೇ?

* ಎಚ್‌ಪಿವಿ ಲಸಿಕೆಯನ್ನು ತುಂಬಾ ಸುರಕ್ಷಿತ ಎಂದು ಪರಿಗಣಿಸಲಾಗಿದೆ, ಒಂದು ಸ್ವಲ್ಪ ಅಡ್ಡಪರಿಣಾಮವಾದರೂ ಒಂದು ಅಥವಾ 2 ದಿನಕ್ಕಿಂತ ಹೆಚ್ಚು ದಿನ ಆ ಸಮಸ್ಯೆ ಇರಲ್ಲ. ಸಾಮಾನ್ಯವಾಗಿ ಕಂಡು ಬರುವ ಅಡ್ಡಪರಿಣಾಮಗಳೆಂದರೆ.

* ಜ್ವರ

* ಸುಸ್ತು

*ಲಸಿಕೆ ಚುಚ್ಚಿದ ಭಾಗದಲ್ಲಿ ನೋವು

* ಮೈಕೈ ನೋವು

* ಸಂಧಿಗಳಲ್ಲಿ ನೋವು ಕೊನೆಯದಾಗಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಈ ಲಸಿಕೆ ತುಂಬಾನೇ ಪ್ರಯೋಜನಕಾರಿಯಾಗಿದೆ.